ಡೀಸಿ ಕಚೇರಿ ಕಟ್ಟಡದಲ್ಲೆ ಬಾಂಗ್ಲಾ ವಲಸಿಗರಿಗೆ ನಕಲಿ ದಾಖಲೆ ಸೃಷ್ಟಿ

Aug 31 2024, 01:38 AM IST
ಅಕ್ರಮ ಬಾಂಗ್ಲಾ ವಲಸಿಗರಿಗೆ ನಕಲಿ ಜನ್ಮದಿನಾಂಕವನ್ನು ಆಧಾರ್‌ ಲಿಂಕ್‌ಗೆ ಸೇರಿಸುತ್ತಿದ್ದ ಜಿಲ್ಲಾಧಿಕಾರಿ ಕಚೇರಿಯ ಕಟ್ಟಡದಲ್ಲಿರುವ ಆಧಾರ್ ಕೇಂದ್ರದಲ್ಲಿ ಕೆಲಸ ಮಾಡುವ ಕಂಪ್ಯೂಟರ್ ಆಪರೇಟರ್ ಅನುಶ್ರೀ ಎಂಬಾಕೆ ಸಿಕ್ಕಿಬಿದ್ದಿದ್ದು, ಅಕೆ ಮೇಲೆ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲೆ ಆಧಾರ್ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಅನುಶ್ರೀ ಎಂಬುವರ ಬಳಿ ಹಣ ಕೊಟ್ಟರೇ ಸಾಕು ನಕಲಿ ಜನ್ಮದಿನಾಂಕವನ್ನು ಸೃಷ್ಠಿ ಮಾಡಲು ಖಾಸಗೀ ಇಂಟರ್‌ ಪಾರ್ಲರ್‌ಗೆ ವಿಳಾಸ ಹೇಳಿ ಕಳುಹಿಸಿ ಕೊಡುತ್ತಾರೆ. ಅಲ್ಲಿ ಸಿದ್ಧವಾದ ಮೇಲೆ ಈಕೆ ಆಧಾರ್‌ಗೆ ಲಿಂಕ್ ಮಾಡಿಕೊಡುವುದನ್ನು ಮೈಗೂಡಿಸಿಕೊಂಡು ಸಂಬಳದ ಜೊತೆ ಈ ರೀತಿಯ ದೇಶದ್ರೋಹಿ ಕೆಲಸ ಮಾಡಿ ಒಬ್ಬರಿಂದ ೫ ಸಾವಿರದಿಂದ ೧೦ ಸಾವಿರದವರೆಗೂ ಹಣ ಪಡೆಯುತ್ತಿದ್ದಳು.