ಡಾ.ಕೈಲಾಸನಾಥ ಶ್ರೀಗಳ ಸೇವೆ ವಿಶ್ವ ದಾಖಲೆ
Sep 18 2024, 01:59 AM ISTಕನ್ನಡಪ್ರಭ ವಾರ್ತೆ ಕೊಲ್ಹಾರಹಳೆ ಕೊಲ್ಹಾರ ಬಳಿಯ ಕೃಷ್ಣಾ ನದಿ ತಟದಲ್ಲಿರುವ ಶೀಲವಂತ ಹಿರೇಮಠದ ಡಾ.ಕೈಲಾಸನಾಥ ಶ್ರೀಗಳ ಆಧ್ಯಾತ್ಮಿಕ ಸಮಾಜ ಸೇವೆಯು ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದೆ. ಶನಿವಾರ ಬೆಂಗಳೂರು ಮಲ್ಲೇಶ್ವರಂನ ಸೇವಾ ಸದನ ಸಾಂಸ್ಕೃತಿಕ ಭವನದಲ್ಲಿ ಜರುಗಿದ ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರಿಕಾರ್ಡ್‌ನಲ್ಲಿ ಗಿನ್ನಿಸ್ ದಾಖಲೆ ಸಮಾರಂಭದಲ್ಲಿ ಶ್ರೀಗಳಿಗೆ ಗಿನ್ನಿಸ್ ದಾಖಲೆ ಸಮಿತಿ ಪದಾಧಿಕಾರಿಗಳಾದ ಡಾ.ಹರ್ಷವರ್ಧನ, ಡಾ.ವಂದನಾ ಡಿಸೋಜ, ಡಾ.ಮಹೇಶಾನಂದಜಿ, ಡಾ.ನಂಬಿ ರಾಜ್, ಡಾ.ವೇದಾ ದೀಕ್ಷಿತ, ಡಾ.ರುಭೇರಿ ಇಮ್ಯಾನುಯೆಲ್, ಡೆಪ್ಯುಟಿ ಕಮಿಷನರ್ ಡಾ.ಶ್ರೀನಿವಾಸ, ಡಾ.ಎ.ಪಿ.ಶ್ರೀನಾಥ, ಡಾ.ಅನಂತಮೂರ್ತಿ ಕುಪ್ಪುಸ್ವಾಮಿ, ಡಾ.ಸೆಲ್ವನ್ ಸೇರಿದಂತೆ ಅನೇಕ ಗಿನ್ನಿಸ್ ದಾಖಲೆಯ ಪ್ರಶಸ್ತಿ ನೀಡಿ ಗೌರವಿಸಿದರು.