ಕೊಚ್ಚಿಹೋದ 31 ವರ್ಷದ ಮಳೆ ದಾಖಲೆ!
Sep 25 2024, 12:58 AM ISTಶಶಿಕಾಂತ ಮೆಂಡೆಗಾರ ಕನ್ನಡಪ್ರಭ ವಾರ್ತೆ ವಿಜಯಪುರಗುಮ್ಮಟ ನಗರಿ ವಿಜಯಪುರದಲ್ಲಿ ಒಂದೇ ದಿನದಲ್ಲಿ 199 ಮಿಮೀ ಮಳೆಯಾಗಿದೆ. ಇದು ಕಳೆದ 31 ವರ್ಷಗಳಲ್ಲಿಯೇ ಅತ್ಯಧಿಕ ಮಳೆ. ಜನಜೀವನ ತತ್ತರಿಸಿದೆ. ಮಳೆಗೆ ಜಿಲ್ಲೆಯ ವಿವಿಧ ಭಾಗಗಳು ಜಲಾವೃತವಾಗಿವೆ. ಜನರು ತತ್ತರಿಸಿ ಹೋಗಿದ್ದಾರೆ. ನಗರ ಜಲಾವೃತವಾಗಿರುವ ದೃಶ್ಯ ಡ್ರೋಣ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವರುಣನ ರೌದ್ರನರ್ತನ ಅಲ್ಲಿ ಪ್ರದರ್ಶನವಾಗಿದೆ.