ಶನಿದೇವರ ದೇವಸ್ಥಾನ ಲೋಕಾರ್ಪಣೆ
May 02 2025, 12:16 AM ISTಕೇರಳಾಪುರ ಗ್ರಾಮದ ಕಾವೇರಿ ಎಡದಂಡೆಯ ಮೇಲೆ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ಶನೇಶ್ವರದೇವರ ಶಿಲೆ ಹಾಗೂ ನೂತನ ದೇವಾಲಯ ಲೋಕಾರ್ಪಣೆ ಹಾಗೂ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮವುಜರುಗಿತು. ದೇವಸ್ಥಾನ ಪ್ರವೇಶದ ನಂತರ ಪೂಜಾದಿ ಕೈಂಕರ್ಯ, ನೂತನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ನಂತರ ರುದ್ರಬೀಷೆಕ, ಹೂವಿನ ಅಲಂಕಾರ, ಮಹಾಮಂಗಳಾರತಿ, ಹವನ, ಹೋಮ, ಅಷ್ಟದೇವರ ಪೂಜೆ ಇತ್ಯಾದಿಗಳನ್ನು ಅರ್ಚಕರಾದ ಅರುಣ್ ಕುಮರ್ ಶಾಸ್ತ್ರಿಗಳು ಮತ್ತು ತಂಡದವರು ನೇರವೇರಿಸಿದರು.