ನಾಡೂರು ಲಾಡಿ: ಇಂದಿನಿಂದ ನವೀಕೃತ ಶಿಲಾಮಯ ಶ್ರೀ ಚತುರ್ಮುಖ ಬ್ರಹ್ಮ ದೇವಸ್ಥಾನ ಬ್ರಹ್ಮಕಲಶೋತ್ಸವ
Feb 12 2025, 12:33 AM IST13 ಶತಮಾನಗಳ ಇತಿಹಾಸ ಹೊಂದಿರುವ ನಾಡೂರಿ, ಈಗ ಲಾಡಿ ಎಂದು ಕರೆಯಲ್ಪಡುವ ಕ್ಷೇತ್ರದ ಶ್ರೀ ಚತುರ್ಮುಖ ಬ್ರಹ್ಮ ದೇವಸ್ಥಾನ ಇದೀಗ ಸಂಪೂರ್ಣ ಶಿಲಾಮಯವಾಗಿ ನವೀಕರಣಗೊಂಡಿದೆ. ಬುಧವಾರದಿಂದ ಫೆ.16ರ ತನಕ ನೂತನ ಶಿಲಾಮಯ ದೇವಳದ ಅನಾವರಣ, ಶ್ರೀ ಚತುರ್ಮುಖ ಬ್ರಹ್ಮ ದೇವರ ಪುನರ್ ಪ್ರತಿಷ್ಠೆ ಮತ್ತು ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವ ನೆರವೇರಲಿದೆ.