- ಚಳ್ಳಕೆರೆಯಲ್ಲಿ ನಕಲಿ ಗುಟ್ಕಾ ತಯಾರಿಕ ಘಟಕ<bha>;</bha> ದೂರು

Oct 21 2023, 12:31 AM IST
ಚಳ್ಳಕೆರೆ ನಗರದ ಅಜ್ಜಯ್ಯಗುಡಿ ರಸ್ತೆಯ ಹಳೆಯದಾದ ಖಾಸಗಿ ಮಿಲ್‌ನಲ್ಲಿ ಯಾವುದೇ ನಾಮಫಲಕವಿಲ್ಲದೆ ನಕಲಿ ಗುಟ್ಕಾವನ್ನು ತಯಾರು ಮಾಡಲಾಗುತ್ತಿತ್ತು. ಮುಂಬೈನ ಜೆಎಂಜೆ ತಯಾರಿಕೆ ಮತ್ತು ಮಾರಾಟ ಘಟಕ ವ್ಯವಸ್ಥಾಪಕ ಅಜಯ್‌ಕುಮಾರ್ ಜೈನ್ ಈ ಬಗ್ಗೆ ದೂರು ನೀಡಿದ್ದು, ನಮ್ಮ ಕಂಪನಿಯ ಟ್ರೇಡ್ ಮಾರ್ಕ್ ಆದ ಜಿಒಎ ನಂ-೦೧, ಜೊತೆಯಲ್ಲಿ ಜೆ.ಎಂ. ಜೋಶಿಯವರ ಭಾವಚಿತ್ರ ಉಪಯೋಗಿಸಿ ನಮ್ಮ ಕಂಪನಿ ತಯಾರು ಮಾಡದ ಪಾನ್ ಮಸಾಲ ಮತ್ತು ಅಡಿಗೆ ಉತ್ಪನ್ನಗಳನ್ನು ನಮ್ಮ ಟ್ರೇಡ್ ಮಾರ್ಕ್ ದುರುಪಯೋಗಿಸಿಕೊಂಡು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೂ ಸಹ ಪ್ರಾಣಕ್ಕೆ ಅಪಾಯವಾಗುವ ಸಂಭವಿದ್ದು, ನಕಲಿ ಗುಟ್ಕಾ ಘಟಕದ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.