ಆರೋಪಿಗಳಿಗೆ ನಕಲಿ ಶ್ಯೂರಿಟಿ: 9 ಮಂದಿ ಸೆರೆ

Dec 15 2023, 01:31 AM IST
ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ಪಡೆಯಲು ನ್ಯಾಯಾಲಯಗಳಿಗೆ ನಕಲಿ ದಾಖಲಿ ಸೃಷ್ಟಿಸಿ ಶ್ಯೂರಿಟಿ (ಭದ್ರತಾ ಠೇವಣಿದಾರ) ನೀಡುತ್ತಿದ್ದ ಓರ್ವ ಮಹಿಳೆ ಸೇರಿದಂತೆ 9 ಮಂದಿಯನ್ನು ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದಾರೆ. ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ತಾಯಮ್ಮ ಕ್ಯಾಂಪ್‌ನ ವೀರೇಶ್‌, ದೇವದುರ್ಗ ತಾಲೂಕಿನ ನಗೋಳಿ ಗ್ರಾಮದ ಅಮರೇಶ್‌, ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕೆಸರಹಟ್ಟಿಯ ಉಮೇಶ್ ಕುಮಾರ್‌, ಕೊಪ್ಪಳ ತಾಲೂಕಿನ ಕುಣಿಕೇರಿ ತಾಂಡದ ಸಂತೋಷ್‌, ಮಾದವಾರದ ಪ್ರಕಾಶ್‌, ಮೈಸೂರು ಜಿಲ್ಲೆ ನಂಜನೂಡು ತಾಲೂಕಿನ ಬಿದರಗೋಡು ಉಮೇಶ್‌, ಕೋಲಾರ ಜಿಲ್ಲೆ ಶ್ರೀನಿವಾಸಪುರದ ನಾಗರಾಜ್‌, ಗುಂಟುಪಲ್ಲಿಯ ಆರ್‌.ಮಂಜುನಾಥ್‌, ಆರ್‌,ಟಿ.ನಗರ ಸಮೀಪ ಚಾಮುಂಡಿನಗರದ ತಬಸಂ ಬಂಧಿತರು. ಆರೋಪಿಗಳಿಂದ 35 ನಕಲಿ ಆಧಾರ್ ಕಾರ್ಡ್‌ಗಳು ಹಾಗೂ ಸ್ವತ್ತಿನ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.