ಭಾರಿ ಮಳೆಗೆ ವಾಣಿಜ್ಯ ನಗರ ತತ್ತರ
Jun 13 2025, 05:10 AM ISTಹಳೆಹುಬ್ಬಳ್ಳಿಯ ಸದರಸೋಪಾ, ಬ್ಯಾಹಟ್ಟಿ ಪ್ಲಾಟ್, ಕೋಳಿಕಾರ ಪ್ಲಾಟ್ಗಳ ಮನೆಗಳಿಗೆ ನೀರು ನುಗ್ಗಿ ಸ್ಥಳೀಯರು ರಾತ್ರಿಯೆಲ್ಲ ಜಾಗರಣೆ ಮಾಡುವಂತಾಯಿತು. ಬುಧವಾರ ಸಂಜೆಯಿಂದ ಸುರಿದ ಮಳೆಗೆ ಪಕ್ಕದಲ್ಲೇ ಇರುವ ನಾಲೆ ತುಂಬಿ ಅಕ್ಕಪಕ್ಕದ ಮನೆಗಳಲ್ಲಿ ನೀರು ತುಂಬಿಕೊಂಡಿತ್ತು. ಇದರಿಂದಾಗಿ ಇಲ್ಲಿನ ಜನರೆಲ್ಲ ಇಡೀ ರಾತ್ರಿ ಮನೆಯಿಂದ ನೀರು ಹೊರಹಾಕುವ ಕಾರ್ಯದಲ್ಲಿ ನಿರತರಾಗಿದ್ದರು.