ಅಪಾಯಮಟ್ಟದಲ್ಲಿ ತುಂಗಭದ್ರಾ ನದಿ: ಕಟ್ಟೆಚ್ಚರಕ್ಕೆ ಟಾಂ ಟಾಂ
Aug 01 2024, 12:16 AM ISTತುಂಗಾ ಹಾಗೂ ಭದ್ರಾ ಅಣೆಕಟ್ಟೆಗಳ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ, ಭದ್ರಾ ಜಲಾಶಯ ಭರ್ತಿಯಾಗಿರುವುದು, ತುಂಗಾ ಡ್ಯಾಂ ಎಲ್ಲ ಕ್ರಸ್ಟ್ ಗೇಟ್ ಮೂಲಕ ನದಿಗೆ ನೀರು ಬಿಡಲಾಗಿದೆ. ಈ ಹಿನ್ನೆಲೆ ತುಂಗಭದ್ರಾ ನದಿಯಲ್ಲಿ ಹರಿಯುವ ನೀರು 1,44,468 ಕ್ಯುಸೆಕ್‌ಗೆ ಏರಿಕೆಯಾಗಿದೆ. ಇದು ಅಪಾಯದ ಮಟ್ಟವಾಗಿದ್ದು, ನದಿಪಾತ್ರದ ನಿವಾಸಿಗಳು, ಗ್ರಾಮಸ್ಥರು ಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮನವಿ ಮಾಡಿದ್ದಾರೆ.