ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಆಚರಣೆ
Sep 18 2024, 01:51 AM ISTಹೊಳೆನರಸೀಪುರ ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಪ್ರಧಾನಿ ಮೋದಿಜೀಯವರ ಜನ್ಮದಿನ ಪ್ರಯುಕ್ತ ಮಹಾತ್ಮಗಾಂಧಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪ್ರಧಾನಿ ಮೋದಿಜೀಯವರ ಭಾವಚಿತ್ರಕ್ಕೆ ಅಭಿಮಾನಿಗಳು ಕ್ಷೀರಾಭಿಷೇಕ ನೆರವೇರಿಸಿ, ಸಿಹಿ ಹಂಚಿದ ನಂತರ ಮಾತನಾಡಿದರು. ಪ್ರಧಾನಿಯವರ ಜನ್ಮದಿನ ಪ್ರಯುಕ್ತ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಬ್ರೆಡ್, ಹಣ್ಣು ಹಂಪಲು ವಿತರಿಸುತ್ತೇವೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಪ್ರಧಾನಿ ಮೋದಿಜೀಯವರು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದು, ಮಂಡಲ ವ್ಯಾಪ್ತಿಯಲ್ಲಿ ಇಂದಿನಿಂದ ಸದಸ್ಯತ್ವ ಅಭಿಯಾನವನ್ನೂ ಪ್ರಾರಂಭಿಸುತ್ತೇವೆ ಎಂದು ಮಳಲಿ ನಾರಾಯಣ್ ತಿಳಿಸಿದರು.