ಪರಿಸರ ಸಂರಕ್ಷಣೆ ಪ್ರತಿ ನಾಗರಿಕರ ಸಾಂವಿಧಾನಿಕ ಕರ್ತವ್ಯ
Jul 28 2025, 12:30 AM ISTಪರಿಸರ ಸಂರಕ್ಷಣೆ ಪ್ರತಿ ನಾಗರಿಕರ ಸಾಂವಿಧಾನಿಕ ಕರ್ತವ್ಯವಾಗಿದೆ ಎಂದು ಪಟ್ಟಣದ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶೆ ಸ್ನೇಹ ಅಭಿಪ್ರಾಯಪಟ್ಟರು. ಪ್ರಕೃತಿಯಲ್ಲಿನ ಗಿಡಮರಗಳನ್ನು ಕಾಳಜಿ ವಹಿಸಿ ರಕ್ಷಿಸಿದರೆ ಮನುಷ್ಯ ಹಾಗೂ ಪ್ರಾಣಿ, ಪಕ್ಷಿ ಸಂಕುಲಕ್ಕೆ ಶುದ್ಧ, ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ. ಇದರಿಂದ ಪ್ರಾಕೃತಿಕ ಸಮತೋಲನ ಕಾಪಾಡಲು ಸಾಧ್ಯ. ಅದೇರೀತಿ ಜಡ್ಜ್ಮೆಂಟ್ ಮೂಲಕ ಬಗೆಹರಿದರೆ ಒಬ್ಬರಿಗೆ ಸೋಲು ಇನ್ನೊಬ್ಬರಿಗೆ ಗೆಲುವಾಗುತ್ತದೆ. ಸೆಪ್ಟೆಂಬರ್ನಲ್ಲಿ ಲೋಕ ಅದಾಲತ್ ಇದ್ದು ಒಬ್ಬರಿಗೊಬ್ಬರು ಕೂತು ಲೋಕ ಅದಾಲತ್ ಮೂಲಕ ರಾಜಿ ಮಾಡಿಕೊಂಡರೆ ಇಬ್ಬರಿಗೂ ಗೆಲುವಾಗುತ್ತದೆ. ಆದ್ದರಿಂದ ರಾಜಿ ಮೂಲಕ ಬಗೆಹರಿಸಿಕೊಂಡು ನೆಮ್ಮದಿ ಜೀವನ ಕಾಣಬಹುದು ಎಂದರು.