ವೆಂಕಟೇಶ್ವರ ಏತ ನೀರಾವರಿ ಯೋಜನೆಗೆ ಪ್ರಾಯೋಗಿಕ ಚಾಲನೆ

Jan 28 2024, 01:19 AM IST
ರಬಕವಿ-ಬನಹಟ್ಟಿ: ತಾಲೂಕಿನ ವೆಂಕಟೇಶ್ವರ ಏತ ನೀರಾವರಿ ಯೋಜನೆಯು ನೂರಕ್ಕೆ ನೂರರಷ್ಟು ಮುಕ್ತಾಯಗೊಂಡಿದೆ. ಕೆಲವು ಕಾರಣಗಳಿಂದ ಯೋಜನೆ ವಿಳಂಬವಾಗಿತ್ತು. ಇಂದು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು. ಶುಕ್ರವಾರ ತಾಲೂಕಿನ ನಾವಲಗಿ ಗ್ರಾಮದ ಹತ್ತಿರ ಇರುವ ಕಾಲುವೆಗೆ ನೀರು ಹರಿಯುತ್ತಿರುವುದನ್ನು ವೀಕ್ಷಣೆ ಮಾಡಿ ಮಾತನಾಡಿ, ವೆಂಕಟೇಶ್ವರ ಏತ ನೀರಾವರಿ ಯೋಜನೆ ಹಾಗೂ ಕುಲಹಳ್ಳಿ ಹುನ್ನೂರು ಏತ ನೀರಾವರಿ ಯೋಜನೆಗಳು ಆರು ತಿಂಗಳ ಹಿಂದೆಯೇ ಮುಕ್ತಾಯಗೊಂಡಿದ್ದವು. ಕೆಲವು ಕಾರಣಗಳಿಂದ ವಿಳಂಬವಾಗಿದ್ದವು. ಕುಲಹಳ್ಳಿ ಹನ್ನೂರು ಏತ ನೀರಾವರಿ ಯೋಜನೆಯಿಂದಾಗಿ ರಬಕವಿ ಬನಹಟ್ಟಿ, ಜಮಖಂಡಿ ಹಾಗೂ ಮುಧೋಳದ 14 ಹಳ್ಳಿಗಳ ನೂರಾರು ಜನ ರೈತರ ಸಾವಿರಾರು ಎಕರೆ ಭೂ ಪ್ರದೇಶಕ್ಕೆ ಅನುಕೂಲವಾಗಲಿದೆ ಎಂದರು.