ಮೊತ್ತಹಳ್ಳಿ ಕೆರೆ ಖಾಲಿ; ಬೆಳೆ ರಕ್ಷಣೆಗೆ ಟ್ಯಾಂಕರ್ ನೀರು..!
Apr 08 2024, 01:05 AM ISTಮಂಡ್ಯ ತಾಲೂಕಿನ ಮೊತ್ತಹಳ್ಳಿ ಗ್ರಾಮದ ಹಲವಾರು ರೈತರು ತಾವು ಬೆಳೆದಿರುವ ತೆಂಗು, ಭತ್ತ, ಟೊಮೆಟೋ ಸೇರಿದಂತೆ ಇನ್ನಿತರ ಬೆಳೆಗಳನ್ನು ಕಾಪಾಡಿಕೊಳ್ಳಲು ಟ್ಯಾಂಕರ್ ನೀರು ಸರಬರಾಜು ಮಾಡುವವರ ಮೊರೆ ಹೋಗಿದ್ದಾರೆ. ಒಂದು ಟ್ಯಾಂಕರ್ ನೀರಿನ ಬೆಲೆ ೧೦೦೦ ರು. ಇದ್ದು, ಅನೇಕರು ಸಾಲ ಮಾಡಿ ಬೆಳೆಗಳಿಗೆ ನೀರು ಹರಿಸುತ್ತಿದ್ದಾರೆ. ಹಣಕಾಸಿನ ಮುಗ್ಗಟ್ಟು ಎದುರಿಸಲಾಗದೆ ಎಷ್ಟೋ ರೈತರು ಬೆಳೆಯನ್ನು ಕೈಚೆಲ್ಲಿ ಕುಳಿತಿದ್ದಾರೆ.