ದೇವಾಲಯಗಳು ಮನುಷ್ಯನ ಬದುಕಿಗೆ ನೆಮ್ಮದಿ ಕರುಣಿಸುತ್ತವೆ
Mar 07 2025, 12:48 AM ISTಸನಾತನ ಧರ್ಮ, ಸಂಸ್ಕೃತಿಯ ಪ್ರತೀಕವಾದ ಮಠಮಾನ್ಯಗಳು ಹಾಗೂ ಧಾರ್ಮಿಕ ಕೇಂದ್ರಗಳಾದ ದೇವಾಲಯಗಳು ಮನುಷ್ಯನ ಬದುಕಿಗೆ ಸುಖ, ಶಾಂತಿ, ನೆಮ್ಮದಿಯನ್ನು ಕರುಣಿಸುವ ಶ್ರದ್ಧಾಕೇಂದ್ರಗಳಾಗಿವೆ ಎಂದು ಶ್ರೀ ಕ್ಷೇತ್ರ ಬೆಳಗೂರು, ಮಾರುತಿ ಪೀಠಾಧಿಪತಿಗಳಾದ ವಿಜಯ ಮಾರುತಿ ಶರ್ಮಾ ಗುರುಗಳು ತಿಳಿಸಿದರು. ಪೂಜೆ, ಪುನಸ್ಕಾರಗಳ ಜತೆಗೆ ಪಂಚಭೂತಗಳಲ್ಲಿ ದೈವೀ ಸಾಕ್ಷಾತ್ಕಾರ ಕಂಡುಕೊಂಡಿರುವುದು ನಮ್ಮೆಲ್ಲರ ಸೌಭಾಗ್ಯವೆಂದರೆ ತಪ್ಪಾಗಲಾರದು. ಪಾಲಕರು ಹಾಗೂ ಗುರುಹಿರಿಯರು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡುವ ಮೂಲಕ ಭವಿಷ್ಯ ರೂಪಿಸುವ ಹೊಣೆಗಾರಿಕೆ ಪ್ರದರ್ಶಿಸಬೇಕು ಎಂದು ಹೇಳಿದರು.