ಗೋಬಿ ಮಾರುವ ವ್ಯಕ್ತಿಗೆ ಇರುವಷ್ಟು ನೆಮ್ಮದಿ ನಮಗೆ ಸರ್ಕಾರಿ ನೌಕರರಿಗೆ ಇಲ್ಲ
Dec 15 2024, 02:00 AM ISTಅಧಿಕಾರಿಗಳ ಒತ್ತಡದಿಂದ ಹೆಂಡತಿ, ಮಕ್ಕಳನ್ನು ದೇವಾಲಯಕ್ಕೂ ಕರೆದುಕೊಂಡು ಹೋಗುವಷ್ಟು ಯೋಗ್ಯತೆ ಇಲ್ಲವಾಗಿದೆ. ಗೋಬಿ ಮಂಚೂರಿ ಮಾರಾಟ ಮಾಡುವ ವ್ಯಕ್ತಿಗೆ ಇರುವಷ್ಟು ನೆಮ್ಮದಿ ಇಂದು ನಮಗೆ ಸರ್ಕಾರಿ ನೌಕರರಿಗೆ ಇಲ್ಲವೆಂದು ಬೇಸರ ಹಾಗೂ ಅಸಹಾಯಕತೆಯಿಂದ ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ನುಡಿದರು. ಜಿಲ್ಲಾ ನೌಕರರ ಸಮಸ್ಯೆ ಕುರಿತು ದನಿ ಎತ್ತಿ ಸಮರ್ಪಕವಾಗಿ ಮಾತಾಡಬೇಕು ಮತ್ತು ಸರ್ಕಾರಿ ನೌಕರರ ನೋವು, ಅನುಭವಿಸುತ್ತಿರುವ ಸಂಕೀರ್ಣತೆ, ಬೇಡಿಕೆ ಹಾಗೂ ಅವರುಗಳ ಹಿತವನ್ನು ಸಮರ್ಪಕವಾಗಿ ಕಾಯಬೇಕು ಎಂದು ನೂತನ ಸದಸ್ಯರಿಗೆ ಸಲಹೆ ನೀಡಿದರು.