ಬೇಲೂರು ಪುರಸಭೆ ಅವಿಶ್ವಾಸದಲ್ಲಿ ಅಶೋಕ್‌ಗೆ ವಿಜಯ

May 02 2025, 11:45 PM IST
ಪುರಸಭೆ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯ ಗೊತ್ತುವಳಿ ಸಭೆಯಲ್ಲಿ ಸದಸ್ಯರು ಮುಖ್ಯಾಧಿಕಾರಿ ವಿರುದ್ಧ ಹರಿಹಾಯ್ದರಲ್ಲದೆ ಕುರ್ಚಿಗಳನ್ನು ಪುಡಿ ಮಾಡಿದ್ದು ಇದನ್ನು ಸಂಸದರು ಹಾಗೂ ಶಾಸಕರು ಮೂಕಪ್ರೇಕ್ಷಕರಾಗಿ ನೋಡುವಂತಾಯಿತು. ಕೆಲ ಕೈ ಸದಸ್ಯರು ವೇದಿಕೆಯತ್ತ ದೌಡಾಯಿಸಿ ಸುಜಯ್ ಅವರ ಕೊರಳಪಟ್ಟಿ ಹಿಡಿದು ಎಳೆದಾಡಿದರು. ಪುರಸಭೆ ಸಭಾಂಗಣದಿಂದ ಮುಖ್ಯಾಧಿಕಾರಿಯನ್ನು ಹೊರದಬ್ಬಿದರು. ಇನ್ನೂ ಕೆಲವರು ಕುರ್ಚಿ, ಮೇಜುಗಳನ್ನು ಎಳೆದಾಡಿ ಮುರಿದು ಹಾಕಿ ಮೈಕನ್ನು ಧ್ವಂಸಗೊಳಿಸಿದರು. ಅವಿಶ್ವಾಸ ನಿರ್ಣಯ ಸಭೆಯಲ್ಲಿ ಮುಖ್ಯಾಧಿಕಾರಿ ಹಿಡಿದು ಎಳೆದಾಡಿದ ಕೈ ಸದಸ್ಯರು ಸಭೆ ನಡೆಸಲು ಮುಖ್ಯ ಅಧಿಕಾರಿಗೆ ಯಾವುದೇ ಅಧಿಕಾರವಿಲ್ಲ ಎಂದು ಆಕ್ರೋಶ ಹೊರ ಹಾಕಿದರು.