ಬಂಟ್ವಾಳ ಜಯರಾಮ ಆಚಾರ್ಯಗೆ‘ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ’
Oct 18 2024, 12:00 AM ISTಬಂಟ್ವಾಳ ಜಯರಾಮ ಆಚಾರ್ಯ ಅವರು ಕಳೆದ 50 ವರ್ಷಗಳಿಂದ ಪಾತ್ರಗಳಿಗೆ ಹಾಸ್ಯರಸದ ಸ್ಪರ್ಶ ನೀಡಿ ಸಾವಿರಾರು ಸನ್ನಿವೇಶಗಳನ್ನು ರಂಜನೀಯವನ್ನಾಗಿಸಿ ಯಕ್ಷ ಪ್ರೇಕ್ಷಕರ ಮನಗೆದ್ದವರು. ಹಾಸ್ಯಪಾತ್ರಗಳೊಂದಿಗೆ ಗಂಭೀರ ಪಾತ್ರಗಳನ್ನೂ ಮಾಡಬಲ್ಲ ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ದುಬೈ ಹಾಗೂ ಇನ್ನಿತರ ಹಲವಾರು ಕಡೆಯ ಸಂಘ ಸಂಸ್ಥೆಗಳಲ್ಲಿ ಪ್ರಶಸ್ತಿ ಸನ್ಮಾನಗಳಿಗೆ ಪಾತ್ರರಾಗಿದ್ದಾರೆ