ರಾಜ್ಯದಲ್ಲಿ ಆಪರೇಷನ್ ಕಮಲಕ್ಕೆ ಸಂಬಂಧಿಸಿ ಮಂಡ್ಯ ಶಾಸಕ ಪಿ.ರವಿಕುಮಾರ್(ಗಣಿಗ ರವಿ) ಮತ್ತೆ ‘ಬಾಂಬ್’ ಸಿಡಿಸಿದ್ದಾರೆ. ಯಾವ್ಯಾವ ಹೋಟೆಲ್, ಏರ್‌ಪೋರ್ಟ್, ಗೆಸ್ಟ್ ಹೌಸ್‌ನಲ್ಲಿ ಸಂಪರ್ಕಿಸಿದ್ದಾರೆ ಎಂಬೆಲ್ಲ ಮಾಹಿತಿ ಇದೆ ಎಂದು ಹೇಳಿದ್ದಾರೆ.
ದೇಶದ ನೂರಾರು ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಒಡ್ಡಿ, ಲಕ್ಷಾಂತರ ವಿಮಾನ ಪ್ರಯಾಣಿಕರನ್ನು ಆತಂಕಕ್ಕೆ ದೂಡಿದ್ದ ಹಾಗೂ ವಿಮಾನಯಾನ ಕಂಪನಿಗಳಿಗೆ ನೂರಾರು ಕೋಟಿ ರು. ನಷ್ಟ ಉಂಟು ಮಾಡಿದ್ದ ಮತ್ತು ವಿಮಾನಯಾನ ವಲಯವನ್ನೇ ಏರುಪೇರು ಮಾಡಿದ್ದ ಯುವಕನನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ವಿಮಾನಗಳಿಗೆ ಬಾಂಬ್ ಸ್ಫೋಟದ ಬೆದರಿಕೆ ಹಾಕುವ ಘಟನೆಗಳು ಭಾನುವಾರವೂ ಮುಂದುವರೆದಿದ್ದು, 24 ವಿಮಾನಗಳಿಗೆ ಇಂಥ ಸಂದೇಶ ರವಾನಿಸಲಾಗಿದೆ.