ಫಲಿತಾಂಶಕ್ಕೆ ಕೆಲವು ದಿನ ಬಾಕಿಯುಳಿದಿರುವಾಗ ಇದೀಗ ತಮ್ಮ ಪಕ್ಷದ ನೆಚ್ಚಿನ ಅಭ್ಯರ್ಥಿ ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಪಕ್ಷಗಳ ಕಟ್ಟಾ ಕಾರ್ಯಕರ್ತರು ಬೆಲೆಬಾಳುವ ವಸ್ತುಗಳ ಪಣಕ್ಕಿಡುವ ಮೂಲಕ ಸವಾಲು ಪ್ರತಿಸವಾಲು ದಿನದಿಂದ ದಿನಕ್ಕೆ ಹೆಚ್ಚತೊಡಗಿದೆ.
‘ಲೋಕಸಭೆ ಚುನಾವಣೆ, ಪರಿಷತ್ ಚುನಾವಣೆಗೆ ಮಾತ್ರವಲ್ಲ ಬಿಜೆಪಿ ಹಾಗೂ ಜೆಡಿಎಸ್ ಅವರು ಶಾಶ್ವತವಾಗಿ ಮೈತ್ರಿ ಮಾಡಿಕೊಳ್ಳಲಿ ಅಥವಾ ಪಕ್ಷಗಳನ್ನೇ ವಿಲೀನ ಮಾಡಿಕೊಳ್ಳಲಿ. ನಮಗೆ ಯಾವುದೇ ರೀತಿಯ ಅಭ್ಯಂತರವಿಲ್ಲ
ಮೂರು ಬಾರಿ ಗೆದ್ದು ಬೀಗಿರುವ ಬಿಜೆಪಿಯ ಬಿ.ವೈ.ರಾಘವೇಂದ್ರ ಅವರು ಮತ್ತೊಮ್ಮೆ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಗೀತಾ ಈ ಬಾರಿ ಲೋಕಸಭೆ ಪ್ರವೇಶ ಮಾಡುವುದು ಖಚಿತ ಎನ್ನುವ ಕಾಂಗ್ರೆಸ್‌ಗೆ ಕಾರ್ಯಕರ್ತರು ಆತ್ಮವಿಶ್ವಾಸದಲ್ಲಿ ಇದ್ದಾರೆ.
‘2025ರ ಸೆ.17ಕ್ಕೆ ಪ್ರಧಾನಿ ನರೇಂದ್ರ ಮೋದಿಗೆ 75 ವರ್ಷ ತುಂಬುತ್ತದೆ. ಹೀಗಾಗಿ 2025ರ ಬಳಿಕ ಅವರು ಪ್ರಧಾನಿಯಾಗಿರುವುದಿಲ್ಲ. ಅಮಿತ್ ಶಾ ಪ್ರಧಾನಿಯಾಗಲಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.