ಡೋಣಿ ತೀರಿದ ಬೆಳೆ ಹಾನಿ ಪರಿಶೀಲನೆಗೆ ಜಂಟಿ ಸಮೀಕ್ಷೆ
Oct 01 2024, 01:31 AM ISTಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ: ಇತ್ತೀಚಿಗೆ ತಾಲೂಕಿನ ಡೋಣಿ ತೀರಿದ ಗ್ರಾಮಗಳಲ್ಲಿ ಪ್ರವಾಹದಿಂದ ಬೆಳೆ, ಮನೆ ಹಾಗೂ ವಿದ್ಯುತ್ ಕಂಬಗಳು ಹಾನಿಯಾಗಿದ್ದು, ಹಾನಿಯ ಕುರಿತು ಕಂದಾಯ, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ ಪರಿಶೀಲಿಸಿ ಶೀಘ್ರ ವರದಿ ಸಿದ್ಧಪಡಿಸುವಂತೆ ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರು ಅಧಿಕಾರಿಗಳಿಗೆ ಸೂಚಿಸಿದರು.