ಶಿಕಾರಿಪುರ ಡಿಸಿಸಿ ಬ್ಯಾಂಕ್ ಎದುರು ವ್ಯಕ್ತಿ ಆತ್ಮಹತ್ಯೆಗೆ ಯತ್ನ
Feb 01 2024, 02:03 AM ISTಹಲವು ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕ್ ಹರಾಜಿನಲ್ಲಿ ಪಡೆದ ಸ್ವತ್ತು ಇದುವರೆಗೂ ತನಗೆ ಹಸ್ತಾಂತರಿಸದ ಹಿನ್ನೆಲೆ ಸಾಲ ಸಮಸ್ಯೆಗೆ ಸಿಲುಕಿದ ವ್ಯಕ್ತಿಯೋರ್ವ ಪಟ್ಟಣದ ಬ್ಯಾಂಕ್ ಎದುರು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ ಘಟನೆ ಬುಧವಾರ ಶಿಕಾರಿಪುರದಲ್ಲಿ ನಡೆದಿದ್ದು, ಎಸ್.ಪಿ.ಸಂತೋಷಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದು, ಬ್ಯಾಂಕ್ ಬಾಗಿಲಿನಲ್ಲಿಯೇ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಆತ್ಮಹತ್ಯೆ ಯತ್ನ ವಿಫಲಗೊಳಿಸಿದ್ದಾರೆ.