ಶಾಲಾ ಬಸ್ ಚಾಲಕನ ಮಗಳು ಜಿಲ್ಲೆಗೆ ಪ್ರಥಮ
May 12 2024, 01:16 AM ISTತರೀಕೆರೆ, ಈ ಬಾರಿ ಪ್ರಕಟಗೊಂಡ ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಪಟ್ಟಣದ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆ ವಿದ್ಯಾರ್ಥಿನಿ ಶಾಲಾ ಬಸ್ ಚಾಲಕ ದರ್ಶನ್ ಟಿ.ವೈ.ಮತ್ತು ರೋಹಿಣಿ ಡಿ.ಅವರ ಮಗಳು ಮೋನಿಷಾ ಡಿ 625 ಅಂಕಗಳಿಗೆ 619 ಅಂಕ ಗಳಿಸಿ ಚಿಕ್ಕಮಗಳೂರು ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿ ಪಟ್ಟಣಕ್ಕೆ, ಓದಿದ ಶಾಲೆಗೆ ಪಾಠ ಹೇಳಿಕೊಟ್ಟ ಗುರುಗಳಿಗೆ, ತಂದೆ ತಾಯಿಗಳಿಗೆ ಕೀರ್ತಿ ತಂದಿದ್ದಾರೆ.