ನನ್ನ ಕಿಡ್ನಾಪ್ ಮಾಡಿಲ್ಲ ಎಂದ ಮಗಳು
May 15 2025, 01:40 AM ISTಅರೇಹಳ್ಳಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಕಿಡ್ನಾಪ್ ಮಾಡಿದ್ದಾರೆ ಎನ್ನಲಾದ ಯುವತಿ ತನ್ನ ಪತಿಯ ಜೊತೆ ಪ್ರತ್ಯಕ್ಷವಾಗಿ ನನ್ನನ್ನು ಯಾರೂ ಅಪಹರಿಸಿಲ್ಲ ನಾನೇ ಪತಿಯೊಂದಿಗೆ ತೆರಳಿದ್ದೇನೆ ಎಂದು ಹೇಳಿಕೆ ನೀಡಿದ್ದು ಪ್ರಕರಣಕ್ಕೆ ಹೊಸ ತಿರುವು ಬಂದಿದೆ. ಚನ್ನರಾಯಪಟ್ಟಣದ ಯುವಕ, ಕೆಲ ತಿಂಗಳ ಹಿಂದೆ ಅರೇಹಳ್ಳಿಯ ಹುಡುಗಿಯನ್ನು ಪ್ರೀತಿಸಿದ್ದ. ಪೋಷಕರ ನಿರಾಕರಣೆ ನಡುವೆಯೂ ಮದುವೆ ಆಗಿದ್ದ ಎನ್ನಲಾಗಿದೆ. ಆದರೆ, ಪೋಷಕರು ಮಗಳನ್ನು ಒಪ್ಪಿಸಿ, ಹುಡುಗನ ಮನೆಯಿಂದ ವಾಪಸ್ ಕರೆ ತಂದಿದ್ದರು. ನಂತರ, ಪತಿ ತನ್ನ ಪತ್ನಿಯನ್ನು ಮರಳಿ ಕರೆದೊಯ್ಯಲು ಯತ್ನಿಸಿದನಾದರೂ ಆಗಿರಲಿಲ್ಲ.