ಉತ್ತಮ ಮಳೆ: ಶಿರಹಟ್ಟಿ ತಾಲೂಕಲ್ಲಿ ಕೃಷಿ ಕಾರ್ಯ ಚುರುಕು
May 24 2025, 12:12 AM ISTಶಿರಹಟ್ಟಿ ತಾಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದ್ದು, ಈ ಬಾರಿ ಮುಂಗಾರು ಉತ್ತಮವಾಗಿರುವ ಲಕ್ಷಣಗಳು ಕಾಣುತ್ತಿರುವುದರಿಂದ ರೈತರು ಕೃಷಿ ಚಟುವಟಿಕೆಯನ್ನು ಚುರುಕುಗೊಳಿಸಿದ್ದಾರೆ. ಕಳೆದೆರಡು ವರ್ಷಗಳಿಂದ ಬರಗಾಲ ಮತ್ತು ಅತಿವೃಷ್ಟಿಗೆ ರೈತರು ಸಿಲುಕಿ ಕಂಗಾಲಾಗಿದ್ದು, ಆಶ್ವಿನಿ, ಭರಣಿ ಮತ್ತು ಕೃತ್ತಿಕಾ ಮಳೆ ಈ ಬಾರಿ ಉತ್ತಮವಾಗಿ ಸುರಿದಿದ್ದು ರೈತರ ಮೊಗದಲ್ಲಿ ಹರ್ಷ ತಂದಿದೆ.