ಹಿಂದೂ ಧರ್ಮದ ಹೊಸ ವರ್ಷದ ಆರಂಭ ಯುಗಾದಿ. ಬೇವು-ಬೆಲ್ಲ ಹಂಚುವ ಈ ಹಬ್ಬದ ಸಂದರ್ಭ ಪಂಚಾಂಗದಲ್ಲಿಯೂ ಬದಲಾಗುತ್ತದೆ. ಒಳಿತನ್ನು ಹೇಳಿದರೆ ದೇವರ ಕೃಪೆಯೆಂದೂ, ಕೆಡಕನ್ನು ವಿವರಿಸಿದರೆ ಅದನ್ನು ತಪ್ಪಿಸಲು ದೇವರಿಗೆ ಮೊರೆ ಹೋಗುವುದೆಂದು ನಂಬಿಕೆ ಹಲವರದ್ದು
ರಾಜ್ಯಾದ್ಯಂತ ಬಿರುಬಿಸಿಲಿನ ತಾಪ ಮೇಲೇರುತ್ತಿರುವ ಮಧ್ಯೆಯೇ ಗುರುವಾರ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ವಿಜಯನಗರ, ಹಾವೇರಿ ಹಾಗೂ ಗದಗ ಜಿಲ್ಲೆಯ ಕೆಲವೆಡೆ ಗುರುವಾರ ಗುಡುಗು-ಮಿಂಚು ಸಹಿತ ಕೆಲ ಗಂಟೆಗಳ ಕಾಲ ಮಳೆಯಾಗಿದೆ.
ಬಾಗಲಕೋಟೆ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಮಾ.18 ಹಾಗೂ 19ಕ್ಕೆ ಉಷ್ಣ ಅಲೆ ಬೀಸುವ ಸಾಧ್ಯತೆ ಇದೆ. ಜತೆಗೆ. ಮಾ.20 ರಿಂದ ಎರಡು ದಿನ ರಾಜ್ಯದ ವಿವಿಧ ಕಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಬೇಸಿಗೆ ಮಳೆ ಮುಂದುವರಿದಿದ್ದು, ಬುಧವಾರ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಮಳೆ ಸುರಿದಿದೆ.