ಸಮಾಜಕ್ಕೆ ಮಹಿಳೆ ತನ್ನ ಸಾಮರ್ಥ್ಯ ತೋರಬೇಕು
Oct 06 2024, 01:21 AM ISTಅರಕಲಗೂಡು ದಸರಾ ಉತ್ಸವದ ಪ್ರಯುಕ್ತ ಪಟ್ಟಣದ ಗಣಪತಿ ಕೊತ್ತಲು ಉದ್ಯಾನದಲ್ಲಿ ನಡೆದ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ತಹಶೀಲ್ದಾರ್ ಕೆ. ಸಿ. ಸೌಮ್ಯ ಮಾತನಾಡಿದರು. ಮಹಿಳೆಯರು ಸಾಮಾಜಿಕವಾಗಿ ನಿರಂತರ ಶೋಷಣೆಗೆ ಒಳಗಾಗುತ್ತಿದ್ದು, ಇದರಿಂದ ಮುಕ್ತರಾಗಲು ತನ್ನ ಸಾಮರ್ಥ್ಯ ಏನು ಎಂಬ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ತಹಶೀಲ್ದಾರ್ ಕೆ. ಸಿ. ಸೌಮ್ಯ ತಿಳಿಸಿದರು. ಪ್ರಸ್ತುತ ದಿನಗಳಲ್ಲಿ ಮಹಿಳೆಯರಿಗೆ ಹೇರಳವಾದ ಅವಕಾಶಗಳು ಲಭ್ಯವಿದ್ದು ಅದನ್ನು ಸಮರ್ಥವಾಗಿ ಬಳಸಿಕೊಳ್ಳವ ಮೂಲಕ ಸಬಲತೆ ಸಾಧಿಸಬೇಕು ಎಂದರು.