ಮಹಿಳೆ ಬಳಿ 2 ಕೆಜಿ ಗಾಂಜಾ ಪತ್ತೆ: ವಶ
Jul 28 2024, 02:04 AM ISTದಾವಣಗೆರೆಯ ಆಜಾದ್ ನಗರ ಠಾಣೆ ಸರಹದ್ದಿನ 1ನೇ ಮುಖ್ಯರಸ್ತೆ, 11ನೇ ಅಡ್ಡ ರಸ್ತೆಯಲ್ಲಿ ಮಹಿಳೆಯೊಬ್ಬರು ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ, ಬಸವ ನಗರ ಪೊಲೀಸ್ ಠಾಣೆ ನಿರೀಕ್ಷಕ ಎಚ್.ಗುರುಬಸವರಾಜ ನೇತೃತ್ವದಲ್ಲಿ ಪಿಎಸ್ಐ ಎಚ್.ಪ್ರಮೀಳಮ್ಮ ಹಾಗೂ ಸಿಬ್ಬಂದಿ ದಾಳಿ ನಡೆಸಿದರು. ಈ ವೇಳೆ ಆರೋಪಿ ಮೆಹಬೂಬಿ (68) ಎಂಬಾಕೆಯನ್ನು ಬಂಧಿಸಿ, ₹60 ಸಾವಿರ ಮೌಲ್ಯದ 2 ಕೆಜಿ 150 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ. ಆಜಾದ್ ನಗರ ಠಾಣೆಯಲ್ಲಿ ಆರೋಪಿ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ.