ಸಾವಯವ ಕೃಷಿ ಉತ್ಪನ್ನ ಮಾರಾಟ ಮಳಿಗೆ ಉದ್ಘಾಟನೆ
Jan 01 2025, 12:00 AM ISTಪಟ್ಟಣದಲ್ಲಿ ಆಧುನಿಕ ಜೀವನದಲ್ಲಿ ಪರಿಸರ ಮತ್ತು ಸಾವಯವ ಕೃಷಿ ಮಹತ್ವದ ಕೃಷಿಗೋಷ್ಠಿ, ನೂತನ ಸಾವಯವ ಕೃಷಿ ಉತ್ಪನ್ನ ಮಾರಾಟ ಮಳಿಗೆ ಉದ್ಘಾಟನಾ ಸಮಾರಂಭವನ್ನು ಜ.1 ರಂದು ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಎಪಿಎಂಸಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತೀರ್ಥಹಳ್ಳಿಯ ಸುಭೀಕ್ಷಾ ಸಾವಯವ ಕೃಷಿಕರ ಬಹುರಾಜ್ಯ ಸಹಕಾರಿ ಸಂಘದ ಉಪಾಧ್ಯಕ್ಷ ಆರ್.ಟಿ.ಪಾಟೀಲ ಹೇಳಿದರು.