ಇಂದಿನಿಂದ ಹಲಸು ಮಾವು ಮಾರಾಟ ಮೇಳ
Jul 02 2025, 11:51 PM ISTಹಾಸನ ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಕರಕುಶಲ ಮತ್ತು ಗೃಹೋಪಯೋಗಿ ವಸ್ತುಗಳ ಮಾರಾಟ ಮೇಳ ಹಾಗೂ ಹಲಸು ಮತ್ತು ಮಾವು ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಗುರುವಾರ ಸಂಜೆ ೪ ಗಂಟೆಗೆ ಉದ್ಘಾಟನೆ ಆಗಲಿದ್ದು, ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್, ಮಹಾಪೌರರಾದ ಎಂ. ಚಂದ್ರೇಗೌಡ, ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡುವರು. ಈ ವಸ್ತು ಪ್ರದರ್ಶನದಲ್ಲಿ ಹಲವು ರೀತಿಯ ಮಾವು, ಹಲಸಿನಹಣ್ಣು ಹಾಗೂ ಕರಕುಶಲ ಮತ್ತು ಗೃಹೋಪಯೋಗಿ ವಸ್ತುಗಳು ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ದೊರೆಯುತ್ತವೆ.