ಎಲ್ಲರನ್ನು ಒಗ್ಗೂಡಿಸುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಶಿವಾನಂದ ಶ್ರೀ

Jan 22 2024, 02:15 AM IST
ಸಮಾಜದಲ್ಲಿ ಜಾತಿ- ಮತ, ಧರ್ಮವನ್ನು ಮೀರಿ ಎಲ್ಲರನ್ನೂ ಒಗ್ಗೂಡಿಸಿ, ಆರ್ಥಿಕವಾಗಿ ಸದೃಢರನ್ನಾಗಿ ಮಾಡುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಮುಖ ಪಾತ್ರ ವಹಿಸುತ್ತಿದೆ. ಗ್ರಾಮೀಣಮಟ್ಟದ ಜನರು ಯೋಜನೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಜ್ಞಾನ ವೃದ್ಧಿಸಿಕೊಂಡು ಅಭಿವೃದ್ಧಿಯನ್ನು ಹೊಂದಬೇಕು. ಗ್ರಾಮೀಣಮಟ್ಟದ ಜನರ ಅಭಿವೃದ್ಧಿಗೆ ದಾರಿ ಸೃಷ್ಟಿಸುವ ಮೂಲಕ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ದಂಪತಿ ಸಮಾಜದಲ್ಲಿ ಹಿಂದುಳಿದ ಜನರ ಬಾಳಿಗೆ ದಾರಿ ದೀಪವಾಗುತ್ತಿದ್ದಾರೆ ಎಂದು ಶಾಂತಪುರ ಸಂಸ್ಥಾನ ಮಠದ ಶಿವಾನಂದ ಶಿವಾಚಾರ್ಯ ಮಹಾಸ್ವಾಮೀಜಿ ಸೊರಬದಲ್ಲಿ ನುಡಿದಿದ್ದಾರೆ.