ರಾಜ್ಯದ ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಮೂಲಸೌಕರ್ಯ ಒದಗಿಸಲು 500 ಕೋಟಿರು. ಯೋಜನೆ ರೂಪಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಉತ್ತರ ಪ್ರದೇಶ ರಾಜ್ಯ ಸರ್ಕಾರದ ‘ಶಾದಿ ಅನುದಾನ ಯೋಜನೆ’ಅಡಿಯಲ್ಲಿ ನವ ವಿವಾಹಿತರಿಗೆ ನೀಡಲಾಗುವ 51,000 ರು. ಧನಸಹಾಯವನ್ನು ಅಕ್ರಮವಾಗಿ ಪಡೆಯಲು ಕೆಲ ಮಹಿಳೆಯರು ಮತ್ತು ಪುರುಷರು ನಕಲಿ ವಧು ವರರ ಸೋಗಿನಲ್ಲಿ ವಿವಾಹವಾದ ರೀತಿ ನಾಟಕವಾಡಿರುವ ಘಟನೆ ರಾಜ್ಯದ ಬಲಿಯಾ ಜಿಲ್ಲೆಯಲ್ಲಿ ನಡೆದಿದೆ.