ರಾಜ್ಯ ಮಟ್ಟಕ್ಕೆ ಜಾಯ್ಸ್ಟನ್ ಡಿಸೋಜಾ ಆಯ್ಕೆ
Nov 06 2024, 11:50 PM ISTಬೇಲೂರು ತಾಲೂಕಿನ ಅರೇಹಳ್ಳಿಯ ಅಂಬೇಡ್ಕರ್ ನಗರದ ಅನುಗ್ರಹ ಆಂಗ್ಲಮಾಧ್ಯಮ ಪ್ರೌಢಶಾಲೆಯ ೧೦ನೇ ತರಗತಿ ವಿದ್ಯಾರ್ಥಿ ಜಾಯ್ಸ್ಟನ್ ಡಿಸೋಜಾರವರು, ಕೇವಲ ೨೬ ಸೆಕೆಂಡ್ನಲ್ಲಿ ೨೦೦ಮೀ. ಓಟದ ಗುರಿ ತಲುಪಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಬೇಲೂರು ತಾಲೂಕಿಗೆ ಕೀರ್ತಿ ತಂದಿದ್ದಾರೆ. ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ೧೪ರಿಂದ ೧೭ ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಜಿಲ್ಲಾ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ ನಡೆಯಿತು.