‘ಸಂವಿಧಾನವನ್ನು 1947ರಲ್ಲಿ ರಚಿಸಲಾಗಿದೆ ಎಂದು ಜನ ನನ್ನ ಬಳಿ ಹೇಳುತ್ತಾರೆ. ಆದರೆ, ಸಂವಿಧಾನ ಸಾವಿರಾರು ವರ್ಷಗಳಷ್ಟು ಹಳೆಯದು ಎಂದು ನಾನು ಅವರಿಗೆ ಹೇಳುತ್ತೇನೆ’ ಎಂಬ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧ ರಾಜಕಾರಣಿ. ತಾವು ಮುಸ್ಲಿಮರ ಪರ ಎಂದು ಹೇಳಿಕೊಳ್ಳುವ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ವಕ್ಫ್ ಬಿಲ್ ಮಂಡನೆ ವೇಳೆ ಸಂಸತ್‌ನಿಂದ ಹೊರಗೆ ಹೋದರು.
ಸಿದ್ದರಾಮಯ್ಯ ಅವರು ಏ.2ರಂದು ಮೂರು ದಿನಗಳ ದೆಹಲಿ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ವರಿಷ್ಠ ರಾಹುಲ್ ಗಾಂಧಿ ಸೇರಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಹನಿಟ್ರ್ಯಾಪ್ ಪ್ರಕರಣವೂ ಸೇರಿ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಯಲ್ಲಿರುವ ಹಲವು ವಿಚಾರಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದಾರೆ
ಸಂಸತ್ ಕಲಾಪದ ವೇಳೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹಾಗೂ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನಡುವೆ ಬುಧವಾರ ಭರ್ಜರಿ ವಾಗ್ವಾದ ನಡೆದಿದೆ. ಬಿರ್ಲಾ ಒಂದು ಹಂತದಲ್ಲಿ ರಾಹುಲ್ ಮೇಲೆ ಕೋಪಗೊಂಡು ‘ಸದನದ ನಿಯಮಗಳನ್ನು ನೀವು ಪಾಲಿಸುತ್ತಿಲ್ಲ. ಹೀಗಾಗಕೂಡದು’ ಎಚ್ಚರಿಕೆ ನೀಡಿದ್ದಾರೆ.