ಕೊನೆಗೂ ಮಂಗಳೂರು-ಕಬಕ ಪುತ್ತೂರು ರೈಲು ಸುಬ್ರಹ್ಮಣ್ಯ ಮಾರ್ಗ ವರೆಗೆ ವಿಸ್ತರಣೆ
Apr 11 2025, 12:33 AM ISTಮೀಟರ್‌ಗೇಜ್ ವೇಳೆ ಮಂಗಳೂರಿನಿಂದ ಸುಬ್ರಹ್ಮಣ್ಯ ಮಾರ್ಗ ವರೆಗೆ ಪ್ಯಾಸೆಂಜರ್ ಓಡಾಟ ಇತ್ತು. ಬ್ರಾಡ್‌ಗೇಜ್ ವೇಳೆ ಪ್ಯಾಸೆಂಜರ್ ಓಡಾಟ ಸ್ಥಗಿತಗೊಂಡಿತ್ತು. ಬಳಿಕ ಮಂಗಳೂರಿನಿಂದ ಕಬಕ ಪುತ್ತೂರು ವರೆಗೆ ಮಾತ್ರ ಪ್ಯಾಸೆಂಜರ್ ಓಡಾಟ ನಡೆಸುತ್ತಿತ್ತು. ಸುಮಾರು 18 ವರ್ಷ ಬಳಿಕ ಈಗ ಮತ್ತೆ ಸುಬ್ರಹ್ಮಣ್ಯ ಮಾರ್ಗ ವರೆಗೆ ಪ್ಯಾಸೆಂಜರ್ ರೈಲು ಓಡಾಟ ಪುನಾರಂಭಿಸಲಿದೆ.