• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಜು.1ರಿಂದ ರೈಲ್ವೆ ಟಿಕೆಟ್‌ ದರ ಏರಿಕೆ

Jun 25 2025, 01:18 AM IST
ಜುಲೈ 1ರಿಂದ ಜಾರಿಗೆ ಬರುವಂತೆ ಟಿಕೆಟ್‌ ದರ ಏರಿಕೆ ಮಾಡಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಆದರೆ ಏರಿಕೆ ಎಲ್ಲಾ ಮಾದರಿಯ ರೈಲುಗಳ, ಎಲ್ಲಾ ರೀತಿಯ ಟಿಕೆಟ್‌ಗೂ ಅನ್ವಯವಾಗದು.

ಬೈಲಹೊಂಗಲ, ಸೊಗಲ, ಸವದತ್ತಿ ಮಾರ್ಗವಾಗಿ ಹೊಸ ರೈಲ್ವೆ ಮಾರ್ಗ ರಚಿಸಿ

Jun 25 2025, 01:17 AM IST
ಬೆಳಗಾವಿ-ಬೈಲಹೊಂಗಲ-ಸೊಗಲ-ಸವದತ್ತಿ ಮಾರ್ಗವಾಗಿ ಧಾರವಾಡ ಸಂಪರ್ಕ ಹೊಂದುವ ಹೊಸ ರೈಲ್ವೆ ಮಾರ್ಗ ರಚಿಸುವಂತೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ ಮಹಾರಾಷ್ಟ್ರದಿಂದ ಸೋಗಲ ಶ್ರೀಕ್ಷೇತ್ರ ಮತ್ತು ರೇಣುಕಾ ಯಲ್ಲಮ್ಮ ಕ್ಷೇತ್ರಕ್ಕೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಹಾಗೂ ಈ ಭಾಗದ ಸರಕು ಸಾಗಾಣಿಕೆಗೆ ಆದ್ಯತೆ ನೀಡಲು, ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ಈ ಮಾರ್ಗ ಅತ್ಯವಶ್ಯಕವಾಗಿದೆ. ಈ ಬಗ್ಗೆ ರೈಲ್ವೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ನೈಋತ್ಯ ರೈಲ್ವೆ ವಿಭಾಗದ ಡಿಆರ್‌ಯುಸಿಸಿ ಸದಸ್ಯ ಎಫ್.ಎಸ್.ಸಿದ್ದನಗೌಡ ರೈಲ್ವೆ ಸಲಹಾ ಮಂಡಳಿ ಸಭೆಯಲ್ಲಿ ಆಗ್ರಹಿಸಿದರು.

ಉಡುಪಿ ರೈಲ್ವೆ ಯಾತ್ರಿ ಸಂಘಕ್ಕೆ ಧೀರಜ್ ಶಾಂತಿ ಅಧ್ಯಕ್ಷ

Jun 23 2025, 11:54 PM IST
ಈ ಸಭೆಯಲ್ಲಿ ಮುಂಬರುವ 2025-27ರ ವರ್ಷದ ಸಾಲಿನ ಅಧ್ಯಕ್ಷರಾಗಿ ಧೀರಜ್ ಶಾಂತಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಮಧುಸೂದನ್ ಹೇರೂರು, ಕೋಶಾಧಿಕಾರಿಯಾಗಿ ಅಜಿತ್ ಕುಮಾರ್ ಶೆಣೈ ಉದ್ಯಾವರ ಅವರನ್ನು ನೇಮಿಸಲಾಯಿತು. ಕಾರ್ಯದರ್ಶಿಯಾಗಿ ಮಂಜುನಾಥ ಮಣಿಪಾಲ್ ಅವರನ್ನು ಮುಂದುವರಿಸಲಾಯಿತು.

ಗದಗ-ವಾಡಿ ರೈಲ್ವೆ ಯೋಜನೆಗೆ ಅನುದಾನ ನೀಡಿದ್ದು ಮೋದಿ

Jun 23 2025, 11:52 PM IST
ಗದಗ-ವಾಡಿ ರೈಲ್ವೆ ಯೋಜನೆಗೆ ಬಿಜೆಪಿ ಸರ್ಕಾರ ₹ 549 ಕೋಟಿ ನೀಡಿದೆ. ಆದರೆ, ಬಸವರಾಜ ರಾಯರಡ್ಡಿ ಅವರು ಎಲ್ಲವೂ ಕಾಂಗ್ರೆಸ್ ಸರ್ಕಾರದ ಕೊಡುಗೆ ಎಂದು ಹೇಳುತ್ತಿದ್ದಾರೆ. 2014ರ ಮೊದಲಿಗೆ ಕಾಂಗ್ರೆಸ್ ಸರ್ಕಾರ ಹಾಗೂ ರಾಯರಡ್ಡಿ ಅವರ ಆಡಳಿತ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ.

ಟ್ರಂಕ್ ರೂಟ್ ಆಗಲಿದೆ ಗದಗ-ವಾಡಿ ರೈಲ್ವೆ ಯೋಜನೆ

Jun 22 2025, 01:18 AM IST
ರಾಯರಡ್ಡಿ ರೈಲು ತರುವುದಿಲ್ಲ, ರೀಲು ಬಿಡುತ್ತಾರೆ ಎಂದು ಟೀಕಿಸುತ್ತಿದ್ದರು. ಅಂತಹವರನ್ನು ಸದ್ಯ ರೈಲು ಹತ್ತಿಸಿದ್ದೇವೆ ಎಂದರು. ನನ್ನ ಮೇಲೆ ಚುನಾವಣೆಗೆ ನಿಂತು ಒಮ್ಮೆ ಶಾಸಕರಾದವರು ಮತ್ತೊಮ್ಮೆ ಶಾಸಕರಾಗಿಯೇ ಇಲ್ಲ ಎಂದು ವಿಪಕ್ಷ ನಾಯಕರಿಗೆ ಚಾಟಿ ಬೀಸಿದರು.

ರೈಲ್ವೆ ಹಳಿಯ ಮೇಲೆ ಬಿದ್ದ ದೈತ್ಯಾಕಾರದ ಬಂಡೆ

Jun 22 2025, 01:18 AM IST
ಸಕಲೇಶಪುರ ತಾಲೂಕಿನ ಯಡಕುಮಾರಿ ಬಳಿ ರೈಲ್ವೆ ಹಳಿಯ ಮೇಲೆ ದೈತ್ಯಾಕಾರದ ಬಂಡೆಗಳು ಮತ್ತು ಗುಡ್ಡ ಕುಸಿತವಾಗಿರುವ ಘಟನೆ ನಡೆದಿದೆ. ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿತು. ಬಂಡೆಗಳ ಉರುಳಿಕೆಯಿಂದ ರೈಲ್ವೆ ಹಳಿಗೆ ಹಾನಿಯಾಗಿದ್ದು, ಸಕಲೇಶಪುರ ರೈಲ್ವೆ ನಿಲ್ದಾಣದಲ್ಲಿ ಮಧ್ಯರಾತ್ರಿಯಿಂದ ರೈಲುಗಳು ನಿಲುಗಡೆಗೊಂಡವು. ನೂರಾರು ಪ್ರಯಾಣಿಕರು ನಿಲ್ದಾಣದಲ್ಲಿ ಕಾಲಕಳೆದರೆ, ಕೆಲವರು ಬೇರೆ ವಾಹನಗಳಲ್ಲಿ ತೆರಳಿದರು. ರೈಲ್ವೆ ಅಧಿಕಾರಿಗಳು ಪ್ರಯಾಣಿಕರಿಗೆ ಕಾಫಿ, ತಿಂಡಿ, ಶೌಚಾಲಯ, ಕುಡಿಯುವ ನೀರು ಮುಂತಾದ ಸೌಲಭ್ಯಗಳನ್ನು ಒದಗಿಸಿದರು.

ರೈಲ್ವೆ ಮಾರ್ಗದ ಕಾಮಗಾರಿ ಶೀಘ್ರ ಆರಂಭ

Jun 21 2025, 12:49 AM IST
ಬೇಲೂರು-ಚಿಕ್ಕಮಗಳೂರು ರೈಲು ಮಾರ್ಗದ ಕೆಲಸ ಶೀಘ್ರವಾಗಿ ಮಾಡುತ್ತೇವೆ. ಹಾಸನ-ಬೇಲೂರು ನಡುವೆ ರೈಲ್ವೆ ಮಾರ್ಗಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಮುಗಿಸಿ ಇನ್ನು ಎರಡೂವರೆ ಮೂರು ವರ್ಷಗಳಲ್ಲಿ ಈ ಕಾಮಗಾರಿ ಮುಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಹೇಳಿದರು. ಹಿಂದೆ ಯುಪಿಎ ಸರ್ಕಾರ ಇದ್ದಾಗ 850ರಿಂದ 900 ಕೋಟಿ ರು. ಅನುದಾನ ಬರುತಿತ್ತು. ಈಗ ಆರರಿಂದ ಏಳು ಸಾವಿರ ಕೋಟಿ ಅನುದಾನ ಬರುತ್ತಿದೆ. ರಾಜ್ಯ ಕೇಂದ್ರ ಸಹಭಾಗಿತ್ವದ ಯೋಜನೆಗೆ ಸಿದ್ದರಾಮಯ್ಯ ಅವರಿಂದ ಒಳ್ಳೆ ಸಹಕಾರ ಸಿಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವನ್ಯಜೀವಿ ಸಂರಕ್ಷಣೆಗೆ ಅರಣ್ಯ- ರೈಲ್ವೆ ಇಲಾಖೆಗಳ ಜಂಟಿ ಕಾರ್ಯ

Jun 20 2025, 12:34 AM IST
ರೈಲು ಹಳಿಗಳ ಮಧ್ಯೆ ಪ್ರಾಣಿಗಳು ಸಾವನ್ನಪ್ಪಬಾರದೆಂಬ ಕಾರಣಕ್ಕೆ ರೈಲ್ವೆ ವಲಯವು ಅರಣ್ಯ ಇಲಾಖೆಯೊಂದಿಗೆ ಸಭೆ ನಡೆಸಿದೆ. 2 ಇಲಾಖೆ ಸೇರಿಕೊಂಡು ಹಲವು ಕ್ರಮ ಕೈಗೊಂಡಿವೆ. ಆನೆ, ಚೀತಾ, ಕಾಡುಹಂದಿ, ಚಿರತೆ, ಝಿರಾಫೆ ಸೇರಿದಂತೆ ವನ್ಯಜೀವಿಗಳು ಎಲ್ಲೆಲ್ಲಿ ಸಂಚರಿಸುತ್ತವೆ ಎಂದು ಜಾಗೆಗಳನ್ನು ಗುರುತಿಸಿವೆ.

ಬೆಂಗಳೂರು ಸುತ್ತಲ 8 ರೈಲ್ವೆ ಮಾರ್ಗಗಳ ಸ್ಥಳ ಸಮೀಕ್ಷೆ ನಡೆಸಿದ್ದು : ಅಶುತೋಷ್ ಕುಮಾರ್ ಸಿಂಗ್

Jun 20 2025, 12:34 AM IST
ಬೆಂಗಳೂರು ಸುತ್ತಲಿನ ಎಂಟು ರೈಲ್ವೆ ಮಾರ್ಗಗಳನ್ನು ಜೋಡಿಹಳಿ, ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ವಿಸ್ತ್ರತ ಯೋಜನಾ ವರದಿಯನ್ನು ಶೀಘ್ರವೇ ರೈಲ್ವೆ ಮಂಡಳಿಗೆ ಸಲ್ಲಿಸಲಾಗುವುದು ಎಂದು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗೀಯ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್ ತಿಳಿಸಿದರು.

ರೈಲ್ವೆ ಸ್ಟೇಷನ್ ಕಟ್ಟಡ ಕಾಮಗಾರಿ ವಿಳಂಬ

Jun 19 2025, 11:49 PM IST
ಕೇಂದ್ರ ಸರ್ಕಾರದ ಅಮೃತ ಯೋಜನೆಯಡಿ ಆರಂಭಗೊಂಡಿರುವ ರೈಲ್ವೆ ಸ್ಟೇಷನ್ ನ ನೂತನ ಕಟ್ಟಡ ಕಾಮಗಾರಿ ವಿಳಂಬಕ್ಕೆ ಅಧಿಕಾರಿಗಳ ವಿರುದ್ಧ ಸಂಸದ ಗೋವಿಂದಕಾರಜೋಳ ಕಿಡಿಕಾರಿ ಬರುವ ಡಿ.31ಕ್ಕೆ ಉದ್ಘಾಟನೆಯಿಟ್ಟುಕೊಳ್ಳಿ ಎಂದು ಎಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 36
  • next >

More Trending News

Top Stories
ಧರ್ಮಸ್ಥಳ ಗ್ರಾಮದ ಬಂಗ್ಲೆ ಗುಡ್ಡೆಯಲ್ಲಿ ಮತ್ತೆ 2 ತಲೆ ಬುರುಡೆ ಪತ್ತೆ
ನೌಕರರ ಮುಂಬಡ್ತಿಗೆ ತರಬೇತಿ ಕಡ್ಡಾಯ
ಧರ್ಮಸ್ಥಳ ಕೇಸ್‌ನಲ್ಲಿ ಷಡ್ಯಂತ್ರ : ಕೋರ್ಟಿಗೆ ಸರ್ಕಾರವೇ ಮಾಹಿತಿ
ಆಳಂದ ಮತ ಅಕ್ರಮಕ್ಕೆ ರಾಹುಲ್‌ 3 ಸಾಕ್ಷ್ಷ್ಯ
ಬೆಂಗಳೂರು : ನಗರದ ಕೆಲವು ಸ್ಥಳಗಳಲ್ಲಿ ಸೆ.20 ರಂದು ವಿದ್ಯುತ್ ಕಡಿತ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved