ಚಿಕ್ಕಜಾಜೂರುವರೆಗೆ ರೈಲ್ವೆ ಮಾರ್ಗ: ಅಂತಿಮ ಸರ್ವೆಗೆ ಆದೇಶ
May 16 2025, 02:11 AM ISTನಗರದ ರೈಲ್ವೆ ನಿಲ್ದಾಣದಿಂದ ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರುವರೆಗೆ ನೂತನ ರೈಲ್ವೆ ಮಾರ್ಗದ ಕಾಮಗಾರಿಯನ್ನು ಶೀಘ್ರವೇ ಆರಂಭಿಸುವ ದೃಷ್ಟಿಯಿಂದ, ಈ ರೈಲ್ವೆ ಮಾರ್ಗದ ಅಂತಿಮ ಸರ್ವೆ ಮಾಡಲು ಕೇಂದ್ರ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದೆ. ಹೊಸ ರೈಲು ಮಾರ್ಗದಿಂದ ಕಳೆದು ಹೋಗಿರುವ ಉಕ್ಕಿನ ನಗರದ ವೈಭವ ಪುನಃ ಮರಳಿ ಬರುವ ಆಶಾ ಭಾವನೆ ಇಲ್ಲಿನ ನಿವಾಸಿಗಳಲ್ಲಿ ವ್ಯಕ್ತವಾಗುತ್ತಿದೆ.