ಲೋಕಸಭಾ ಚುನಾವಣೆಯಲ್ಲಿ ಸ್ಟಾರ್ ಚಂದ್ರು ಕೈಬಿಡಬೇಡಿ: ಶಾಸಕ ರವಿಕುಮಾರ್
Mar 07 2024, 01:48 AM IST2023ರ ವಿಧಾನಸಭಾ ಚುನಾವಣೆ ವೇಳೆ ಬಸರಾಳು ಗ್ರಾಮದಲ್ಲಿ ನಡೆದ ಸಮಾವೇಶದಲ್ಲಿ 15 ಸಾವಿರ ಜನ ಸೇರಿದ್ದಿರಿ. ಆದರೆ, ಬೂತ್ ತೆಗೆದಾಗ 500 ಮತಗಳು ಜನತಾದಳಕ್ಕೆ ಹೆಚ್ಚು ದೊರಕಿದ್ದವು. ಆ ಸಮಯದಲ್ಲಿ ನನಗೆ ಬಹಳ ಬೇಸರವಾಗಿತ್ತು. ಅದಕ್ಕಾಗಿ ನೇರವಾಗಿ ಹೇಳುತ್ತಿದ್ದೇನೆ. ನನ್ನನ್ನು ಕೈಬಿಟ್ಟ ಹಾಗೇ ಸ್ಟಾರ್ ಚಂದ್ರು ಅವರನ್ನು ಕೈ ಬಿಡಬೇಡಿ. ಬಿಜೆಪಿ-ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಸ್ಟಾರ್ ಚಂದ್ರು ಅವರಿಗೆ ಬಸರಾಳು ಹೋಬಳಿಯಲ್ಲಿ ಹತ್ತು ಸಾವಿರ ಲೀಡ್ ಕೊಡಬೇಕು.