ವ್ಯಾಪಾರ ವಹಿವಾಟು ನಡೆಸಲು ಮಹಿಳೆಯರಿಗೆ ಉತ್ತೇಜನ ಬೇಕು
Mar 18 2025, 12:34 AM ISTಗ್ರಾಮೀಣ ಪ್ರದೇಶದ ಸ್ತ್ರೀಶಕ್ತಿ ಸಂಘಗಳ ಮೂಲಕ ಮಹಿಳೆಯರಿಗೆ ಉತ್ತೇಜನ ನೀಡುವ ಸಲುವಾಗಿ ಈ ರೀತಿಯ ಸ್ಟಾಲ್‌ಗಳನ್ನು ತೆರೆದು ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಅವರುಗಳಿಗೆ ಸಂಪೂರ್ಣ ಸಹಕಾರ ನೀಡಬೇಕೆಂದು ಶಾಸಕ ಎಚ್.ಡಿ.ರೇವಣ್ಣ ಸಲಹೆ ನೀಡಿದರು. ಮಾರಾಟ ಮೇಳಗಳು ಬೇರೆ ಬೇರೆ ಸ್ಥಳಗಳಲ್ಲೂ ತೆರೆದು ವ್ಯಾಪಾರ ವಹಿವಾಟು ನಡೆಸಲು ಮಹಿಳೆಯರಿಗೆ ಉತ್ತೇಜನ ನೀಡಬೇಕಿದೆ ಎಂದರು. ನಂತರ ಉತ್ಪನ್ನಗಳ ಗುಣ್ಣಮಟ್ಟದ ಬಗ್ಗೆ ಚರ್ಚಿಸಿ, ಹಲವು ಪದಾರ್ಥಗಳನ್ನು ಖರೀದಿಸಿ, ಶುಭಹಾರೈಸಿದರು.