ಹಂಗರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ
Jan 10 2025, 12:46 AM ISTನಿಸ್ವಾರ್ಥ ಸೇವಾ ಮನೋಭಾವ, ನಮ್ಮೂರು ಎಂಬ ಅಭಿಮಾನ ಹಾಗೂ ಮಕ್ಕಳ ಶೈಕ್ಷಣಿಕ ಏಳಿಗೆಗೆ ಅನಂತ್ ಕುಮಾರ್ ಅವರ ದೂರದೃಷ್ಠಿಯ ಕಾರಣದಿಂದ ಹಂಗರಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆ ಉತ್ತಮ ಶಾಲೆ ಎಂಬ ಹೆಗ್ಗಳಿಕೆಯ ಜತೆಗೆ ಪ್ರಖ್ಯಾತಿ ಗಳಿಸಿದೆ. ಇಂತಹ ಯಶಸ್ಸಿಗೆ ಕಾರಣಕರ್ತರಾದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎನ್.ಆರ್.ಅನಂತ್ ಕುಮಾರ್ ಅವರಿಗೆ ಅಭಿನಂದನೆಗಳು ಹಾಗೂ ಅವರ ಸ್ನೇಹಿತರ ಕಾರ್ಯ ಶ್ಲಾಘನೀಯವೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ಪ್ರಶಂಸಿದರು.