ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವಾರ್ಷಿಕೋತ್ಸವ: ವಿಪ್ರೋತ್ತಮರಿಗೆ ಗೌರವ
Sep 05 2025, 01:01 AM ISTಶ್ರೀ ಕುದುಕುಳ್ಳಿ ಈಶ್ವರ ದೇವಸ್ಥಾನದ ಅರ್ಚಕ, ದೇವಳಗಳ ಬ್ರಹ್ಮಕಲಶದ ಸಂದರ್ಭದಲ್ಲಿ ಅಷ್ಟಬಂಧ ಒದಗಿಸುವ ಸಗ್ರಿ ಅನಂತ ಭಟ್, ಕಕ್ಕುಂಜೆಯ ಶಿವಳ್ಳಿ ಶ್ರೀ ವಿಷ್ಣುಮೂರ್ತಿ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಅರ್ಚಕ, ದೇವಳದ ಸರ್ವತೋಮುಖ ಅಭಿವೃದ್ಧಿಗೆ ಅರ್ಪಿಸಿಕೊಂಡ ವಿಷ್ಣುಮೂರ್ತಿ ಶಾಸ್ತ್ರಿ ಕಕ್ಕುಂಜೆ ಮತ್ತು ಪರಿಷತ್ತಿನ ಕಾರ್ಯಕ್ರಮಗಳಿಗೆ ಫಲಾಪೇಕ್ಷೆ ಇಲ್ಲದೆ ಸೇವೆ ನೀಡುವ ಛಾಯಾಚಿತ್ರಗ್ರಾಹಕ ರಂಗನಾಥ ಸರಳಾಯ ಅವರಿಗೆ ಪರಿಷತ್ತಿನ ವತಿಯಿಂದ ಗೌರವಾರ್ಪಣೆ ನೀಡಲಾಯಿತು.