ಮುರುಘಾಶ್ರೀ ವಿಚಾರಣೆ ಮುಂದೂಡಿಕೆ
Sep 24 2024, 01:55 AM ISTಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮುರುಘಾಶ್ರೀಗಳ ವಿಚಾರಣೆಯನ್ನು ಸೆಪ್ಟಂಬರ್ 26ಕ್ಕೆ ಜಿಲ್ಲಾ ನ್ಯಾಯಾಲಯ ಮುಂದೂಡಿದೆ. ಮುರುಘಾ ಶ್ರೀಗಳನ್ನು ಸೋಮವಾರ ವಿಚಾರಣೆಗೆಂದು ಚಿತ್ರದುರ್ಗದ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಈ ಸಂಬಂಧ ಮುರುಘಾ ಶ್ರೀ ಪರ ವಾದ ಮಾಡಲು ಬೆಂಗಳೂರಿನಿಂದ ವಕೀಲ ಸಿ.ವಿ. ನಾಗೇಶ್ ಬಂದಿದ್ದರು. ಸಂತ್ರಸ್ತೆ ಕ್ರಾಸ್ ಎಕ್ಸಾಮಿನೇಷನ್ ಮಾಡಬೇಕಿತ್ತು. ಆದರೆ ಸಂತ್ರಸ್ತೆ ಕಾರಣಾಂತರದಿಂದ ಗೈರಾದ ಹಿನ್ನೆಲೆ ನ್ಯಾಯಾಧೀಶರು ವಿಚಾರಣೆ ಮುಂದೂಡಿದರು.