ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಮಾಚಿದೇವ: ವಿಜಯೇಂದ್ರ
Feb 05 2024, 01:45 AM ISTಮಡಿವಾಳ ಮಾಚಿದೇವ ಮಹಾಸ್ವಾಭಿಮಾನಿ. ವೀರಭದ್ರನ ಅವತಾರ ಎಂದು ಪುರಾಣಗಳಲ್ಲಿ ದಾಖಲಾಗಿರುವ ಮಾಚಿದೇವ ಅವರು, "ಅರಸುತನ ಮೇಲಲ್ಲ ಅಗಸತನ ಕೀಳಲ್ಲ " ಎಂದು ತಿಳಿಸಿದ್ದಾರೆ. ಕಲ್ಯಾಣ ಕ್ರಾಂತಿಯಲ್ಲಿ ಮಡಿವಾಳ ಮಾಚಿದೇವ ಸರ್ವಶ್ರೇಷ್ಠ ಕಾಯಕನಿಷ್ಠ ಶರಣರಾಗಿ, ಧರ್ಮ ಸಂರಕ್ಷಣೆ ಜತೆಗೆ ವಚನ ಸಾಹಿತ್ಯ ರಕ್ಷಣೆಯ ದಂಡ ನಾಯಕತ್ವ ವಹಿಸಿಕೊಂಡು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ವೀರ ಶರಣರು ಎಂದು ಕ್ಷೇತ್ರದ ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಶಿಕಾರಿಪುರದ ಮಟ್ಟಿಕೋಟೆಯಲ್ಲಿ ಹೇಳಿದ್ದಾರೆ.