ಶಾಂತಿ, ಸಹೋದರತೆಯಿಂದ ಬಾಳೋದು ಇಂದಿನ ಅಗತ್ಯ
Apr 12 2024, 01:03 AM ISTದೇವರಹಿಪ್ಪರಗಿ: ಪವಿತ್ರ ರಂಜಾನ್ ಹಬ್ಬದ ನಿಮಿತ್ಯ ಪಟ್ಟಣದ ಈದ್ಗಾ ಮೈದಾನಕ್ಕೆ ಭೇಟಿ ನೀಡಿ, ಪ್ರಾರ್ಥನೆಯಲ್ಲಿ ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರು ಪಾಲ್ಗೊಂಡು ಪವಿತ್ರ ರಂಜಾನ್ ಹಬ್ಬದ ಶುಭಾಶಯ ಕೋರಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಂಜಾನ್ ಮಾಸ ಹಾಗೂ ಅದೇ ಅವಧಿಯಲ್ಲಿ ಬರುವ ರಂಜಾನ್ ಹಬ್ಬ ಮುಸ್ಲಿಂ ಸಮುದಾಯದ ಸಹೋದರರ ಅತ್ಯಂತ ಪವಿತ್ರ ಹಬ್ಬ. ಈ ಹಬ್ಬದ ಸಂದೇಶ ನಾವೆಲ್ಲರೂ ಪಾಲಿಸುವುದು ಇಂದಿನ ಅಗತ್ಯವಾಗಿದೆ. ನಾವು ಎಲ್ಲರೂ ಸಹೋದರತೆ, ಶಾಂತಿಯೊಂದಿಗೆ ಸಹಬಾಳ್ವೆ ನಡೆಸುವುದು ಇಂದಿನ ಅಗತ್ಯವಾಗಿದೆ.