ಕ್ರೀಡಾಸಕ್ತಿ ಜೊತೆಗೆ ಶಾಂತಿ, ಶಿಸ್ತು ಪಾಲನೆ ರೂಢಿಸಿಕೊಳ್ಳಬೇಕು: ವೆಂಕಟೇಶ ಮೂರ್ತಿ
Aug 29 2024, 12:53 AM ISTಮಲೇಬೆನ್ನೂರು: ಇಲ್ಲಿಗೆ ಸಮೀಪದ ನಂದಿಗುಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಮಲೇಬೆನ್ನೂರು ವಲಯಮಟ್ಟದ ಕ್ರೀಡಾಕೂಟ ಜರುಗಿತು. ಶಾಲೆ ಪ್ರಾಂಶುಪಾಲ ವೆಂಕಟೇಶ್ಮೂರ್ತಿ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿ, ಕ್ರೀಡೆಗಳನ್ನು ಬಳಸಿಕೊಂಡು ವಿದ್ಯಾರ್ಥಿ ಜೀವನದಲ್ಲಿ ಶಾಂತತೆ, ಶಿಸ್ತು, ಸಮಯ ಪಾಲನೆ ರೂಢಿಸಿಕೊಳ್ಳಿ ಎಂದರು. ಕ್ರೀಡಾ ಧ್ವಜಾರೋಹಣ ನೆರವೇರಿಸಿದ ಸರ್ಕಾರಿ ಪ್ರೌಢಶಾಲೆ ಉಪ ಪ್ರಾಂಶುಪಾಲ ಜಗದೀಶ್ ಉಜ್ಜಮ್ಮನವರ್ ಮಾತನಾಡಿ, ಮಕ್ಕಳು ಓದು, ಬರವಣಿಗೆಯಂತೆ ಕ್ರೀಡೆಯಲ್ಲಿ ಭಾಗವಹಿಸಿದರೆ ಆರೋಗ್ಯವು ಸುಧಾರಣೆಯಾಗಲು ಸಾಧ್ಯವಿದೆ ಎಂದರು.