ವಿಶ್ವದಲ್ಲಿ ಶಾಂತಿ ಕಾಪಾಡಲು ಯುವಜನತೆ ಮುಂದಾಗಬೇಕು
Sep 22 2024, 01:46 AM IST ಜಗತ್ತಿನಲ್ಲಿ ಇಂದು ವಿವಿಧ ವಿಚಾರಗಳಿಗೆ ಮನುಕುಲದ ನಡುವೆಯೇ ಗಲಭೆ ಸೃಷ್ಟಿಯಾಗಿ ಆಶಾಂತಿ ವಾತಾವರಣ ಸೃಷ್ಟಿಯಾಗಿದೆ, ಉಕ್ರೇನ್, ರಷ್ಯಾ, ಇಸ್ರೇಲ್ ಪ್ರತಿಯೊಂದು ದೇಶಗಳ ನಡುವೆ ಯುದ್ಧ ನಡೆಯುವ ಸಂದರ್ಭದಲ್ಲಿ ನಾವುಗಳು ಶಾಂತಿ ಕಾಪಾಡಬೇಕು. ಅಶಾಂತಿ ಸೃಷ್ಟಿಯಾಗಿರುವುದಕ್ಕೆ ಅಂತ್ಯ ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಯೋಚಿಸಬೇಕಿದೆ ಎಂದರು. ಕರ್ನಾಟಕ ರಾಜ್ಯದಲ್ಲಿ ಕೂಡ ಧರ್ಮ ಧರ್ಮಗಳ ನಡುವೆ ಗಲಭೆಗಳು ಸೃಷ್ಟಿಯಾಗುತ್ತಿವೆ, ಮಂಗಳೂರು, ನಾಗಮಂಗಲ ಸೇರಿದಂತೆ ವಿವಿಧೆಡೆ ನಡೆದ ಗಲಭೆಗಳ ಇದಕ್ಕೆ ಉತ್ತಮ ಉದಾಹರಣೆಯಾಗಿವೆ ಇಂತಹ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಶಾಸಕ ಸ್ವರೂಪ್ ಹೇಳಿದರು.