ಎಲ್ಲ ಧರ್ಮಗಳು ಶಾಂತಿ ಸಾರಿದ್ದಾವೆಯೇ ಹೊರತು ಸಂಘರ್ಷವನ್ನಲ್ಲ
Nov 11 2024, 12:54 AM ISTಧರ್ಮ-ಧರ್ಮಗಳ ನಡುವೆ ಆಚರಣೆ ಬೇರೆ-ಬೇರೆಯಾದರೂ ಅದು ಹೇಳುವ ನೀತಿ ಮಾನವ ಕಲ್ಯಾಣವೇ ಆಗಿದೆ. ಸಮಾಜದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆ ಬೆಳೆಸುವುದೇ ಧರ್ಮದ ಮೂಲ ಉದೇಶ ಎಂದು ಯಳನಾಡು ಮಹಾ ಸಂಸ್ಥಾನದ ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು. ತಾಲೂಕಿನ ಕಸಬಾ ಹೋಬಳಿ ಹಬ್ಬನಘಟ್ಟ ಗ್ರಾಮದ ಶ್ರೀ ರಾಮಮಂದಿರ ದೇವಾಲಯದ ಲೋಕಾರ್ಪಣೆ ಮಹೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.