ಗ್ರಾಮಸ್ಥರ ಪಾಲಿಗೆ ದೇವರಾಗಿರುವ ಶಿಕ್ಷಕ

Sep 05 2025, 01:01 AM IST
ಕನ್ನಡಪ್ರಭ ವಾತೆ೯ ಇಂಡಿ ಲೋಕಕ್ಕೆ ಶಿಕ್ಷಣದ ಬೆಳಕು ಹರಡಿ ಆದಶ೯ ಶಿಕ್ಷಕನಾಗಿ, ದೇವ ಮಾನವನಾಗಿ ಬಾಳಿದ ರೇವಣಸಿದ್ದಪ್ಪ ಮಾಸ್ತರರ ನೆನಪಿಗಾಗಿ ಇಂಡಿ ತಾಲೂಕಿನ ಅಥಗಾ೯ ಗ್ರಾಮದಲ್ಲಿ 1925 ರಲ್ಲಿಯೇ ಗ್ರಾಮಸ್ಥರು ದೇಗುಲ ನಿರ್ಮಿಸಿದ್ದಾರೆ. ಪಲ್ಲಕ್ಕಿಯನ್ನು ತಯಾರಿಸಿದ್ದು, ಪ್ರತಿ ವಷ೯ ಶಿವರಾತ್ರಿ ದಿನ ಗ್ರಾಮದಲ್ಲಿ ಅವರ ಜಾತ್ರೆಯನ್ನು ಮಾಡಲಾಗುತ್ತದೆ. ರೇವಣಸಿದ್ದಪ್ಪ ಮಾಸ್ತರ ಪಲ್ಲಕ್ಕಿ ಮೆರವಣಿಗೆಯನ್ನು ನಿಂತು ನೋಡಬೇಕು, ಪಲ್ಲಕ್ಕಿ ಹತ್ತಿರ ಬರುತ್ತಿದ್ದಂತೆ ರಸ್ತೆಯ ಮೇಲೆ ಅಡ್ಡಲಾಗಿ ಮಲಗುತ್ತಾರೆ. ಪಲ್ಲಕ್ಕಿ ಹೊತ್ತಿರುವರು ಇವರನ್ನು ದಾಟಿ ಹೋಗುತ್ತಾರೆ. ಇಷ್ಟೊಂದು ಭಯಭಕ್ತಿಯಿಂದ ಅವರನ್ನು ಪೂಜಿಸಲಾಗುತ್ತಿದೆ. ರೇವಣಸಿದ್ದಪ್ಪ ಮಾಸ್ತರರ ಕತ೯ವ್ಯ ಪ್ರಜ್ಞೆ ಅವರನ್ನು ಸ್ಥಾನಕ್ಕೇರಿಸಿದೆ.