ಬಣಜವಾಡ ಶಿಕ್ಷಣ ಸಂಸ್ಥೆಯ ಕೀರ್ತಿ ಹೆಚ್ಚಿಸಿದ ರ್‍ಯಾಂಕ್‌ಗಳು
Apr 11 2024, 12:51 AM ISTಅಥಣಿ ಬಣಜವಾಡ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯದ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ರಾಜ್ಯಮಟ್ಟದಲ್ಲಿ ರ್‍ಯಾಂಕ್ ಗಳಿಸಿ ಮಹಾವಿದ್ಯಾಲಯದ ಕೀರ್ತಿ ಹೆಚ್ಚಿಸಿದ್ದಾರೆ. ಮಹಾವಿದ್ಯಾಲಯದ ಫಲಿತಾಂಶ ಶೇ.100 ಆಗಿದ್ದು, ಪ್ರಥಮ ಶ್ರೇಣಿಯಲ್ಲಿ 82, ಡಿಸ್ಟಿಂಕ್ಷನ್ 255, ಶೇ.90ಕ್ಕಿಂತ ಅಧಿಕ 105 ವಿದ್ಯಾರ್ಥಿಗಳು, ಶೇ.95ಕ್ಕಿಂತ ಅಧಿಕ 58 ವಿದ್ಯಾರ್ಥಿಗಳು ಅಂಕ ಗಳಿಸಿದ್ದಾರೆ.