ವೀರಶೈವ ಲಿಂಗಾಯತರ ಸಂಖ್ಯೆ 2 ಕೋಟಿ: ಅಣಬೇರು ರಾಜಣ್ಣ
May 12 2025, 12:36 AM ISTರಾಜ್ಯದಲ್ಲಿ ಸುಮಾರು 2 ಕೋಟಿಯಷ್ಟು ವೀರಶೈವ ಲಿಂಗಾಯತರಿದ್ದರೂ, ಜಾತಿಗಣತಿಯಲ್ಲಿ ನಮ್ಮ ಸಮಾಜದ ಜನಸಂಖ್ಯೆಯನ್ನು ಕೇವಲ 50-60 ಲಕ್ಷವೆಂದು ತೋರಿಸಿದ್ದಾರೆ. ನಮ್ಮಲ್ಲಿ ಒಗ್ಗಟ್ಟು ಇಲ್ಲದಿದ್ದರೆ ಮುಂದಿನ ಹತ್ತು ವರ್ಷಗಳಲ್ಲಿ ನಮ್ಮ ಸಮಾಜವೇ ಇಲ್ಲವೆಂದು ತೋರಿಸಿದರೂ ಅಚ್ಚರಿ ಇಲ್ಲ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ, ಅಪೂರ್ವ ಹೋಟೆಲ್ ಸಮೂಹಗಳ ಸಂಸ್ಥಾಪಕ ಅಣಬೇರು ರಾಜಣ್ಣ ಹೇಳಿದ್ದಾರೆ.