ಗೋಳಗುಮ್ಮಟ ಪ್ರವಾಸಿಗರ ಸಂಖ್ಯೆ ಇಳಿಮುಖ
Jul 16 2024, 12:32 AM ISTಜಗತ್ತಿನ 7ನೇ ಅದ್ಭುತ, ವಿಶ್ವವಿಖ್ಯಾತ ಗೋಳಗುಮ್ಮಟ ನೋಡಲು ಮುಗಿಬೀಳುತ್ತಿದ್ದ ಪ್ರವಾಸಿಗರ ಸಂಖ್ಯೆಯಲ್ಲಿ ಕ್ಷೀಣಗೊಂಡಿದೆ. ಮಹಾಮಾರಿ ಕೋವಿಡ್ ಆವರಿಸಿದ ಬಳಿಕ ಬಹುತೇಕ ಕಡಿಮೆಯಾಗಿದ್ದ ಪ್ರವಾಸಿಗರ ಸಂಖ್ಯೆ ಕಳೆದ ವರ್ಷ ಜಾಸ್ತಿಯಾಗಿತ್ತು. ಆದರೆ, ಈ ಬಾರಿ ಮತ್ತೆ ಕಡಿಮೆಯಾಗಿದೆ. ಈ ಸಲದ ಬರಗಾಲದ ಪರಿಣಾಮ ಜಿಲ್ಲೆಗೆ ಬರುವ ಪ್ರವಾಸಿಗರ ಮೇಲೂ ಬೀರಿದೆ. ನಮ್ಮ ರಾಜ್ಯದ ಪ್ರವಾಸಿ ತಾಣಗಳ ವೀಕ್ಷಣೆಯಲ್ಲಿ ಭಾರತೀಯರ ಸಂಖ್ಯೆ ಕಡಿಮೆಯಾಗಿದ್ದರೇ, ವಿದೇಶಿಗರ ಸಂಖ್ಯೆ ಹೆಚ್ಚಾಗಿದ್ದು ಕೊಂಚ ಸಮಾಧಾನ ತಂದಿದೆ.